ಎಟಿಎಂ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್‍ಗಳು ಬಿಗ್ ಶಾಕ್ ನೀಡಿವೆ. ಎಟಿಎಂ ವಿತ್ ಡ್ರಾ ಮೇಲೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಬ್ಯಾಂಕ್‍ಗಳು ಮುಂದಾಗಿವೆ. ಆಗಸ್ಟ್ 1ರಿಂದ ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್‍ಗಳು ನೀಡಿದ ಐದು ಉಚಿತ ಟ್ರಾನ್‍ಸಾಕ್ಷನ್‍ಗಿಂತ ಕಡಿಮೆ ಬಾರಿ ಹಣ ಡ್ರಾ ಮಾಡಿಕೊಂಡರೂ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಐದು ಟ್ರಾನ್ಸಾಕ್ಷನ್‍ಗಳ ಬಳಿಕ ಪ್ರತಿ ವಿತ್‍ಡ್ರಾಗೆ 17 ರೂಪಾಯಿ, ನಾನ್ ಫೈನಾನ್ಶಿಯಲ್ ಟ್ರಾನ್ಸಾಕ್ಷನ್‍ಗಳ ಮೃಲೆ ಆರು ರೂಪಾಯಿ ಶುಲ್ಕವನ್ನು ಬ್ಯಾಂಕ್‍ಗಳು ವಸೂಲಿ ಮಾಡಲಿವೆ. ಎಟಿಎಂ ಸ್ಥಾಪನೆ, ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಇದರ ಭಾರವನ್ನು ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಗ್ರಾಹಕರ ಮೇಲೆ ಹಾಕಲು ಬ್ಯಾಂಕ್‍ಗಳು ಮುಂದಾಗಿವೆ.
#publictv #hrranganath #bigbulletin